ಬಹು ನಿರೀಕ್ಷಿತ ‘ಪುಷ್ಪ 2’ ರಿಲೀಸ್ ಡೇಟ್ ಫಿಕ್ಸ್ ! ಬೆಂಗಳೂರು, ಸೆಪ್ಟೆಂಬರ್ 12, 2023 (..):ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ‘ಪುಷ್ಪ 2 ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹು ‘ಪುಷ್ಪ 2: ದಿ ರೂಲ್’ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ರಂದು ತೆರೆ ಕಾಣಲಿದೆ ಎಂದು ಮಾಹಿತಿ ಹೊರ ಬಿದ್ದಿದೆ. ವಿಶ್ವದಾದ್ಯಂತ 2024ರ ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್​ ಆಗಲಿದೆ ಎಂಬ ಪೋಸ್ಟರ್ ಮೂಲಕ ಚಿತ್ರತಂಡವು ಸಿನಿಮಾದ ರಿಲೀಸ್​ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಟಾಲಿವುಡ್ ನಿರ್ದೇಶಕ ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ ಚಿತ್ರ ಮುಂದಿನ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ’ ಎಂದು ನಟ ಅಲ್ಲು ಅರ್ಜುನ್ ಕೂಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಂದಹಾಗೆ ‘ಪುಷ್ಪ’ ಪಾರ್ಟ್ 1 ಸಿನಿಮಾ 350 ಕೋಟಿ ರೂ. ಗಳಿಸಿತ್ತು.