ಪ್ಯಾರಾಲಿಂಪಿಕ್ಸ್‌: ‘ಚಿನ್ನ’ ಗೆದ್ದ ಭಾರತದ ನಿತೇಶ್ ಕುಮಾರ್ ಪ್ಯಾರಿಸ್,ಸೆಪ್ಟಂಬರ್,2,2024 (..):ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಬ್ಯಾಡ್ಮಿಂಟನ್ ಎಸ್‌ಎಲ್ 3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಹರಿಯಾಣದ ಷಟ್ಲರ್ ನಿತೇಶ್ ಕುಮಾರ್, ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಮೂರು ಗೇಮ್‌ ಗಳ ಪಂದ್ಯದಲ್ಲಿ 2-1 (21-14, 18-21, 22-21) ಗೆಲುವು ಸಾಧಿಸಿದರು. ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಅಗ್ರ ಶ್ರೇಯಾಂಕದ ನಿತೇಶ್ ಕುಮಾರ್ ಮೊದಲ ಗೇಮ್‌ ನಲ್ಲಿ 21-14 ರಲ್ಲಿ ಗೆಲುವು ಸಾಧಿಸಿದರು, ಎರಡನೇ ಗೇಮ್‌ನಲ್ಲಿ 18-21ರಲ್ಲಿ ಸೋಲನುಭವಿಸಿದರು. ಮೂರನೇ ನಿರ್ಣಾಯಕ ಗೇಮ್‌ನಲ್ಲಿ ನಿತೇಶ್ ಕುಮಾರ್ 23-21 ರಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. : , , ,