ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮದೇನು ತಕರಾರು ಇಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್. ತುಮಕೂರು,ಸೆಪ್ಟಂಬರ್,9,2023(..):ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮುನ್ನೆಲೆಗೆ ಬಂದಿದ್ದು ಈ ಕುರತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ. ಜಿ.ಪರಮೇಶ್ವರ್, ಮೈತ್ರಿ ಮಾಡಿಕೊಂಡರೇ ನಮಗೇನು ಅಭ್ಯಂತರವಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಏನು ಫಲಿತಾಂಶ ಬಂತು ಅಂತ ಜನರು ಗೊತ್ತಿದೆ. ಜೆಡಿಎಸ್ ಜೊತೆ ಮೈತ್ರಿಯಿಂದ ಬಿಜೆಪಿಗೆ ಏನು ಲಾಭವಾಗುತ್ತೆ ನೋಡೋಣ ಎಂದರು. ಅನೇಕ ಪಕ್ಷಗಳು ಸೇರಿ ಇಂಡಿಯಾ ಮೈತ್ರಿಕೂಟ ಮಾಡಿವೆ. ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಬಯಸಿದ್ದೇವೆ ಎಂದರು. : – - - – -. . .