ಅಧಿಕಾರಕ್ಕಾಗಿ ಯಾರ ಜೊತೆಯಾದ್ರೂ ಸರಿ ಸೇರಿಕೊಳ್ತಾರೆ-ಜೆಡಿಎಸ್ ಗೆ ಸಿಎಂ ಸಿದ್ಧರಾಮಯ್ಯ ಟಾಂಗ್. ಹುಬ್ಬಳ್ಳಿ,ಸೆಪ್ಟಂಬರ್,9,2023(..):ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಸಿಎಂ ಸಿದ್ಧರಾಮಯ್ಯ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತ್ಯಾತೀತ ಅಂತ ಹೆಸರಿಟ್ಟುಕೊಂಡಿರುವವರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ದೇವೇಗೌಡರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ‌ ಎಂದಿದ್ದರು. ಆದರೆ ಇದೀಗ ಬಿಜೆಪಿವರ ಜೊತೆ ಸೇರಿ‌ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್​ನವರು ಸೇರಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದರೆ ಜೆಡಿಎಸ್ ನವರು ಕೋಪಗೊಳ್ಳುತ್ತಿದ್ದರು. ಈಗ ಬಿಟೀಂ ಅಲ್ವಾ ಎಂದು ಸಿಎಂ ಸಿದ್ಧರಾಮಯ್ಯ ವ್ಯಂಗ್ಯವಾಡಿದರು. : - - - – - --