ಮೈಸೂರಿನಲ್ಲಿ ನಾಳೆ ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ದೇಣಿಗೆ ಸಂಗ್ರಹ ಅಭಿಯಾನ. ಮೈಸೂರು,ಸೆಪ್ಟಂಬರ್,8,2023(..):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆ ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ದೇಣಿಗೆ ಸಂಗ್ರಹಿಸುವ ಅಭಿಯಾನ ನಡೆಯಲಿದೆ. ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ದೇಣಿಗೆ ಸಂಗ್ರಹಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಅಭಿಯಾನವನ್ನು ಆರಂಭಿಸಲಿದೆ. ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ಮೈಸೂರಿನ ರಂಗಕರ್ಮಿಗಳು ಶನಿವಾರ ಅಂದರೆ ನಾಳೆ ಸಂಜೆ 5ಕ್ಕೆ ನಂಜರಾಜ ಬಹದ್ದೂರ್ ಛತ್ರದಿಂದ ಹೊರಟು ಶಿವರಾಮಪೀಟೆ ಬೀದಿಯಲ್ಲಿ ದೇಣಿಗೆ ಸಂಗ್ರಹಿಸಲಿದ್ದಾರೆ. ಈ ಅಭಿಯಾನವು ಉತ್ಸವ ಆರಂಭವಾಗುವ ಸೆಪ್ಟೆಂಬರ್ 19ರವರೆಗೆ ಮುಂದುವರೆಯಲಿದೆ. ಸೆಪ್ಟೆಂಬರ್ 19ರಿಂದ 24ರವರೆಗೆ ನಡೆಯುವ ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ದೇಣಿಗೆ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ಮಕ್ಕಳ ಕಲಿಕೆಯನ್ನು ನಲಿಕೆಯನ್ನಾಗಿಸಬಲ್ಲ ಈ ಉತ್ಸವಕ್ಕೆ ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡಿಬೇಕು ಎಂದು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ರಾಜಲಕ್ಷ್ಮಿ ಮನವಿ ಮಾಡಿದ್ದಾರೆ. : - – - - – .