ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಪಿಐಎಲ್ ಆಲಿಸಿದ ಹೈಕೋರ್ಟ್ ಬೆಂಗಳೂರು,ಸೆಪ್ಟಂಬರ್,8,2023(..):ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆ‌ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ‌ ಮರು ತನಿಖೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಿಬಿಐ ಅಥವಾ ಎಸ್ ಐಟಿಯಿಂದ ಮರು ತನಿಖೆ ಮಾಡಲು ಆದೇಶಿಸಬೇಕು ಮತ್ತು ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ ಗೆ ಗಿರೀಶ್ ಎಂಬುವರು ಪಿಐಎಲ್ ಸಲ್ಲಿಕೆ ಮಾಡಿದ್ದರು. ಪಿಐಎಲ್ ಆಲಿಸಿದ ಹೈಕೋರ್ಟ್, ಅರ್ಜಿ ಸಂಬಂಧ ಇತರೆ ಕಾನೂನು ವಿಧಾನಗಳನ್ನು ಅನುಸರಿಸಿ ಪರಿಹಾರ ಪಡೆದುಕೊಳ್ಳುವಂತೆ ಅರ್ಜಿದಾರರಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿದಾರ ಗಿರೀಶ್ ಅರ್ಜಿಯನ್ನ ಹಿಂಪಡೆದಿದ್ದಾರೆ. : - - - - –