ಭಾರತ ಅಂತಾ ಕರೆಯೋಕೆ ವಿಪಕ್ಷದವರಿಗೆ ಇಷ್ಟವಿಲ್ಲ – ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ. ಬೆಂಗಳೂರು,ಸೆಪ್ಟಂಬರ್,7,2023(..):ಇಂಡಿಯಾ ಬದಲು ಭಾರತ ಎಂದು ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಆರ್.ಅಶೋಕ್, ಭಾರತ ಅಂತಾ ಕರೆಯೋಕೆ ವಿಪಕ್ಷದವರಿಗೆ ಇಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ. ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್, ಇಂಡಿಯಾ ಬದಲು ಭಾರತ ಅನ್ನೋ ಹೆಸರು ಅವರಿಗೆ ಉರಿ ತಂದಿದೆ. ಮಜ್ಜಿಗೆ ಕುಡಿದರೇ ಹೊಟ್ಟೆ ಉರಿ ಕಡಿಮೆಯಾಗುತ್ತೆ ಭಾರತ ಅಂತಾ ಕರೆಯೋಕೆ ವಿಪಕ್ಷದವರಿಗೆ ಇಷ್ಟವಿಲ್ಲ. ಇಂಡಿಯಾ ಅನ್ನೋದು ಬ್ರಿಟಿಷರು ಕೊಟ್ಟ ಹೆಸರು ಭಾರತ ಅನ್ನೋ ಹೆಸರು ಸಂವಿಧಾನದಲ್ಲೇ ಇದೆ ಎಂದು ವಾಗ್ದಾಳಿ ನಡೆಸಿದರು. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ವೋಟ್ ಬ್ಯಾಂಕ್ ಗಾಗಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾತುಗಳನ್ನಾಡಿದ್ದಾರೆ ಎಂದು ಹರಿಹಾಯ್ದರು. : - –--- -.