ಮೇಲ್ಮನವಿ ಅರ್ಜಿ ವಜಾ: ಸುಪ್ರೀಂಕೋರ್ಟ್ ನಲ್ಲಿ ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಹಿನ್ನಡೆ. ಮೈಸೂರು, ಸೆಪ್ಟೆಂಬರ್,7,2023(..):ಪ್ರೇಮಕುಮಾರಿ ಪ್ರಕರಣದಲ್ಲಿ ಮಾಜಿ ಸಚಿವ ಎಸ್‌.ಎ. ರಾಮದಾಸ್ ​ಗೆ ಸುಪ್ರೀಂಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಪ್ರೇಮಕುಮಾರ್ ದಾಖಲಿಸಿದ್ದ ವಂಚನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕ ಎಸ್.ಎ ರಾಮದಾಸ್​​ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ. 2013ರಲ್ಲಿ ತನ್ನನ್ನು ಮದುವೆಯಾಗಿ ವಂಚಿಸಿದ್ದಾರೆಂದು ಪ್ರೇಮಕುಮಾರಿ ಎನ್ನುವರು ಮಾಜಿ ಶಾಸಕ ಎಸ್.ಎ ರಾಮದಾಸ್ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಾಮದಾಸ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ ಪ್ರರಣವನ್ನು ರದ್ದುಪಡಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರಾಮದಾಸ್ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ ಸಹ ಅರ್ಜಿಯನ್ನು ವಜಾಗೊಳಿಸಿದೆ. ಎಸ್.ಎ ರಾಮದಾಸ್ ವಿರುದ್ಧ ಬೆದರಿಕೆ, ಕೊಲೆ ಯತ್ನ ಸೇರಿ ಹಲವು ಆರೋಪ ಮಾಡಿ ಪ್ರೇಮಕುಮಾರಿ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. : – - - – .