ಬಳ್ಳಾರಿ ಜೈಲಿಗೆ ಆಗಮಿಸಿ ನಟ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ,ಆಗಸ್ಟ್,31,2024 (..):ಪರಪ್ಪನ ಅಗ್ರಹಾರ ಕೇಂದ್ರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ಆದ ಮೂರು ದಿನಗ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರು ಬಳ್ಳಾರಿಗೆ ಆಗಮಿಸಿ ನಟ ದರ್ಶನ್ ಭೇಟಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯದ ಫೋಟೊ ವೈರಲ್ ಆಗಿತ್ತು. ಈ ಬೆನ್ನಲ್ಲೆ ಎಚ್ಚೆತ ಸರ್ಕಾರ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಉಳಿದ ಆರೋಪಿಗಳನ್ನ ಮೈಸೂರು, ಶಿವಮೊಗ್ಗ, ಬೆಳಗಾವಿ ಇನ್ನಿತರ ಜೈಲಿಗೆ ಶಿಫ್ಟ್ ಮಾಡಿತ್ತು. ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಮೂರು ದಿನಗಳ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ಭೇಟಿಯಾಗಿದ್ದಾರೆ. ಪತ್ನಿ, ಪುತ್ರನನ್ನು ಕಂಡ ನಟ ದರ್ಶನ್ ಭಾವುಕರಾದರು ಎನ್ನಲಾಗಿದೆ. : , , , ,