ಕರ್ನಾಟಕ ಎಂದು ಘೋಷಣೆಯಾಗಿ 50 ವರ್ಷ: ನ.1ರಿಂದ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮ- ಸಚಿವ ಶಿವರಾಜ್ ತಂಗಡಗಿ. ಮೈಸೂರು,ಸೆಪ್ಟಂಬರ್,4,2023(..):ಬರುವ ನವೆಂಬರ್ 1ಕ್ಕೆ ಕರ್ನಾಟಕ ಎಂದು ಘೋಷಣೆಯಾಗಿ 50 ವರ್ಷವಾಗಲಿದೆ. ಹಾಗಾಗಿ ನವೆಂಬರ್ 1ರಿಂದ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಮೈಸೂರಿನ ಕಲಾಮಮಂದಿರದ ಕಿರುರಂಗಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಈಗಾಗಲೇ ರಾಜ್ಯದ ಮೂರು ವಿಭಾಗಗಳಲ್ಲಿ ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರ ಸಭೆ ನಡೆಸಲಾಗಿತ್ತು. ಅಂತಿಮವಾಗಿ ಇಂದು ಮೈಸೂರು ವಿಭಾಗದ ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರ ಸಭೆ ನಡೆಸಲಾಯಿತು. ಹಾಗಾಗಿ ನಾಲ್ಕು ವಿಭಾಗಗಳ ಸಾಹಿತಿಗಳು, ‌ಕಲಾವಿದರು, ಕನ್ನಡಪರ ಹೋರಾಟಗಾರರ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದೇನೆ. ಈ ಸಂಬಂಧ ಸದ್ಯದಲ್ಲೇ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ದಪಡಿಸುತ್ತೇವೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಕನ್ನಡ ಕಲಿಕೆಗಾಗಿ ಶೀಘ್ರದಲ್ಲೇ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು. : 50 – – -- – .1- - .