ಸೆಪ್ಟೆಂಬರ್ 7ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ ಬರಲಿದೆ ತಲೈವಾ ‘ಜೈಲರ್’ ! ಬೆಂಗಳೂರು, ಸೆಪ್ಟೆಂಬರ್ 03, 2023 (..):ಸಾಕಷ್ಟು ಗಮನ ಸೆಳೆದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾ ಇದೀಗ ಒಟಿಟಿಗೆ ಬರಲು ರೆಡಿಯಾಗಿದೆ. ಜೈಲರ್‌ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂದು ಸ್ವತಃ ಪ್ರೈಂ ಅಧಿಕೃತವಾಗಿ ಘೋಷಿಸಿದೆ. ಕೆಲವು ದಿನಗಳ ಹಿಂದೆ ಈ ಜೈಲರ್‌ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಸನ್‌ ನೆಕ್ಸ್ಟ್ ಗಳಲ್ಲಿ ಸ್ಟ್ರೀಮಿಂಗ್‌ ಆಗಬಹುದು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಆದರೀಗ ಒಟಿಟಿ ರೈಟ್ಸ್ ಅಮೆಜಾನ್ ಪ್ರೈಂ ವಿಡೀಯೋ ಪಾಲಾಗಿದೆ. ಸೆಪ್ಟೆಂಬರ್‌ 7ರಂದು ಅಮೆಜಾನ್‌ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭವಾಗಲಿದೆ ಎಂದು ಅಮೆಜಾನ್ ಪ್ರೈಂ ವಿಡೀಯೋ ತಿಳಿಸಿದೆ.