10 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ. ಬೆಂಗಳೂರು, ಸೆಪ್ಟಂಬರ್, 2,2023(..):ಕಾಂಗ್ರೆಸ್​ ಸರ್ಕಾರದಿಂದ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, ಇಂದು 10 ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪೃಥ್ವಿಕ್ ಶಂಕರ್ ಹಾಗೂ ಕನಿಕಾ ಸಿಕ್ರಿವಾಲ್ ಅವರನ್ನು ನೇಮಿಸಲಾಗಿದೆ. ಗುಪ್ತಚರ ಇಲಾಖೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ, ಕುಶಾಲ್ ಚೌಕ್ಸೆ. ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್ ನೇಮಕ ಮಾಡಲಾಗಿದೆ. ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ರೋಹನ್ ಜಗದೀಶ್ ಅವರು ನೇಮಕಗೊಂಡಿದ್ದಾರೆ. ಬೆಂಗಳೂರು ಉಗ್ರರ ನಿಗ್ರಹ ದಳ ಎಸ್​ಪಿಯಾಗಿ ಶಿವಾನ್ಷು ರಜಪೂತ್, ಉಡುಪಿ ಎಎನ್‌ಎಫ್ ಎಸ್​ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್​ ಆರ್​ಪಿ ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ಎಂ.ಎನ್.ದೀಪನ್ ಹಾಗೂ ಬೆಂಗಳೂರು ವೈರ್​ಲೆಸ್ ವಿಭಾಗದ ಎಸ್​ಪಿಯಾಗಿ ಹೆಚ್.ಎನ್.ಮಿಥುನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. : - – 10