ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ: ಜನರ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ-ಮಾಜಿ ಸಚಿವ ಶ್ರೀರಾಮುಲು. ಯಾದಗಿರಿ,ಸೆಪ್ಟಂಬರ್,2,2023(..):ಕಾಂಗ್ರೆಸ್ ಸರ್ಕಾರ ಐದು ವರ್ಷ ನಡೆಯಲಿ ಜನರು ಕೊಟ್ಟಿರುವ ತೀರ್ಮಾನದ ವಿರುದ್ದ ನಾವು ಕೆಲಸ ಮಾಡಲು ಸಿದ್ಧರಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ. ಕಾಂಗ್ರೆಸ್ ಗೆ 135 ಸ್ಥಾನ ಕೊಟ್ಟಿದ್ದಾರೆ. ಅವರು ಅಧಿಕಾರ ನಡೆಸಲಿ. ನಾವು ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ ಜನರು ಕೊಟ್ಟ ತೀರ್ಮಾನದ ವಿರುದ್ದ ಕೆಲಸ ಮಾಡಲ್ಲ ಎಂದರು. ಆದರೆ ಕಾಂಗ್ರೆಸಿಗರು ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ. ಇದು 50 ಪರ್ಸೆಂಟ್ ಕಮಿಷನ್ ಸರ್ಕಾರ. ವಿಧಾನಸೌಧದ ಕೆಳಮಹಡಿಯಿಂದ ಮೇಲಿನ 3ನೇ ಮಹಡಿಯವರೆಗೆ ಲಂಚ ಪಡೆಯುತ್ತಾರೆ ಎಂದು ಶ್ರೀರಾಮುಲು ಆರೋಪಿಸಿದರು. : - – 5 - -