ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿ ಜವಾಜಿ ಹೋಟೆಲ್ ಆ್ಯಂಡ್ ರೆಸಾರ್ಟ್ ಉದ್ಘಾಟನೆ ಮೈಸೂರು, ಸೆಪ್ಟೆಂಬರ್ 01, 2023 (..):ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿ ಆರಂಭವಾಗಿರುವ ಜವಾಜಿ ಹೋಟೆಲ್ ಆ್ಯಂಡ್ ರೆಸಾರ್ಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಗರದ ಮುಖ್ಯರಸ್ತೆಯಲ್ಲಿ ನೂತನವಾಗಿ ಜವಾಜಿ ಹೋಟೆಲ್ ಆ್ಯಂಡ್ ರೆಸಾರ್ಟ್ ಆರಂಭಿಸಲಾಗಿದ್ದು, ಕಳೆದ ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಇದ್ದರು.