ಮೊದಲು ಬಿಜೆಪಿಯಲ್ಲಿರುವವರನ್ನ ಉಳಿಸಿಕೊಳ್ಳಲಿ- ಬಿಎಲ್ ಸಂತೋಷ್ ಗೆ ಜಗದೀಶ್ ಶೆಟ್ಟರ್ ಟಾಂಗ್. ಹುಬ್ಬಳ್ಳಿ,ಸೆಪ್ಟಂಬರ್,1,2023(..):ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಸಂಘಟನಾಕಾರ್ಯದರ್ಶಿ ಬಿಎಲ್ ಸಂತೋಷ್ ಗೆ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್, ಮೊದಲು ಬಿಜೆಪಿಯಲ್ಲಿರುವವರನ್ನ ಉಳಿಸಿಕೊಳ್ಳಲಿ. ಬಿಜೆಪಿ ಅಸ್ತಿತ್ವ ಉಳಿಸಿಕೊಂಡರೇ ಸಾಕಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ. ಬರೀ ಅಪರೇಷನ್ ಮಾಡೋದೇ ಕೆಲಸವಾಗಿದೆ. ಬಿಜೆಪಿಯಲ್ಲಿ ಹಿರಿಯರನ್ನ ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು. : – - - - – .