ನಮ್ಮ ರೈತರಿಗೆ ನೀರು ಬಿಡದೇ ತಮಿಳುನಾಡಿಗೆ ನೀರು: ರಾಜ್ಯ ಸರ್ಕಾರದ ವಿರುದ್ದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ. ಮಂಗಳೂರು,ಆಗಸ್ಟ್,31,2023(..):ರಾಜ್ಯದ ರೈತರಿಗೆ ಜನರಿಗೆ ಸರಿಯಾಗಿ ನೀರು ಇಲ್ಲದೇ ಇದ್ದರೂ ಕೆಆರ್ ಎಸ್ ಜಲಾಶಯದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಇತ್ತ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ತಮಿಳುನಾಡಿಗೆ ನೀರಿಬಿಟ್ಟಿದ್ದರಿಂದ ನಮ್ಮ ರಾಜ್ಯದ ರೈತರಿಗೆ ಸಮಸ್ಯೆ ಆಗಲಿದೆ. ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದು ರಾಜ್ಯದ ರೈತರಿಗೆ ಮಾಡಿದ ದೊಡ್ಡ ಅನ್ಯಾಯ. ಇಡೀ ರಾಜ್ಯದಲ್ಲಿ ನೀರಿನ ಅಭಾವ, ಬರದ ಪರಿಸ್ಥಿತಿ ಇದೆ. ಇದರ ಮಧ್ಯೆ ರೈತರ ಪಂಪ್ ಸೆಟ್ ಗೂ ವಿದ್ಯುತ್ ನೀಡುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಧಾರವಿರುದ್ದ ಹೋರಾಟ ಮಾಡುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು. : - - – - .