ನಟ ದರ್ಶನ್ ಜೈಲು ಪಾಲು ವಿಚಾರ: ಕಿಚ್ಚ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು..? ಬೆಂಗಳೂರು,ಆಗಸ್ಟ್, 31,2024 (..):ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿರುವ ಕುರಿತು ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ನಟ ಸುದೀಪ್, ದರ್ಶನ್ ಗೂ ಕುಟುಂಬ ಇದೆ. ಅಭಿಮಾನಿಗಳಿಗೆ ನೋವಾಗುವುದು ಬೇಡ. ನನಗೆ ದೇಶದ ಕಾನೂನು, ಸರ್ಕಾರದ ಮೇಲೆ ನಂಬಿಕೆ ಇದೆ. ಮಾಧ್ಯಮಗಳ ಮೂಲಕ ನಮಗೆ ಎಲ್ಲಾ ವಿಚಾರ ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ. ದರ್ಶನ್ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಪ್ರಕರಣದ ಬಗ್ಗೆ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. : , , , ,