ಚಂದ್ರಯಾನ-3 ಯಶಸ್ವಿ ಬೆನ್ನಲ್ಲೆ ಸೂರ್ಯಯಾನಕ್ಕೆ ಇಸ್ರೋ ಸಜ್ಜು: ಸೆ.2ರಂದು ಆದಿತ್ಯ -1 ಉಡಾವಣೆ ಬೆಂಗಳೂರು,ಆಗಸ್ಟ್,28,2023(..):ಭಾರತೀಯ ಬಾಹ್ಯಕಾಶ ಸಂಸ್ಥೆ() ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದು ಚಂದ್ರಯಾನ-3 ಯಶಸ್ವಿ ಬೆನ್ನಲ್ಲೆ ಸೂರ್ಯಯಾನಕ್ಕೆ ಸಜ್ಜಾಗಿದೆ. ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ -ಎಲ್ 1 ಅನ್ನು ಸೆಪ್ಟೆಂಬರ್ 2, 2023 ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆ ಮಾಡುವುದಾಗಿ ಇಸ್ರೋ ಘೋಷಿಸಿದೆ. ಸೆಪ್ಟಂಬರ್2 ರ ಬೆಳಿಗ್ಗೆ 11.50ಕ್ಕೆ ಆದಿತ್ಯ -1 ಉಡಾವಣೆಯಾಗಲಿದೆ. ಸೂರ್ಯನ ವರ್ತನೆ ತಿಳಿದುಕೊಳ್ಳುವ ಉದ್ದೇಶವನ್ನು ಇಸ್ರೋ ಹೊಂದಿದ್ದು, ಸೌರ ಬಿರುಗಾಳಿಗಳು ಹೇಗೆ ಉಂಟಾಗುತ್ತವೆ. ಸೌರಮಾರುತಗಳು ಅಪ್ಪಳಿಸುವಾಗ ಮುಂಜಾಗ್ರತ ಕ್ರಮ ಕೈಗೊಳ್ಳಲು ಇದು ಸಹಾಯವಾಗಲಿದೆ. : – - - -1- - 2