ವಿವಾಹಿತ ಮಹಿಳೆ ಜೊತೆ ಪತಿ ಎಸ್ಕೇಪ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ. ಕೊಡಗು,ಆಗಸ್ಟ್ 25,2023(..):ವ್ಯಕ್ತಿಯೋರ್ವ ತನ್ನ ಪತ್ನಿಯನ್ನ ಬಿಟ್ಟು ಬೇರೆ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿರುವ ಘಟನೆ ಕೊಡಗು() ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯ ಸತೀಶ್(45) ಪರಸ್ತ್ರಿಯೊಂದಿಗೆ ಪರಾರಿಯಾದ ವ್ಯಕ್ತಿ. ಈ ಕುರಿತು ಪತ್ನಿ ರೇಖಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸತೀಶ್ ಸ್ವಂತ ಅಂಗಡಿ ಹಾಕಿಕೊಂಡು ಕೆಲಸ ಮಾಡುತ್ತಿದ್ದನು. ಈ ನಡುವೆ ಅದೇ ಅಂಗಡಿಯಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದು ಅದೇ ಮಹಿಳೆಯೊಂದಿಗೆ ಸತೀಶ್ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಸತೀಶ್ ತನ್ನ ಜೊತೆಯಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಇದರಿಂದ ಕಂಗಾಲಾದ ರೇಖಾ, ಪೊಲೀಸ್​ ಠಾಣೆ ಮೆಟ್ಟಿಲ್ಲೇರಿದ್ದು, ಗಂಡ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ರೇಖಾ ಮನವಿಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣೆ ಪೊಲೀಸರು ಸತೀಶ್​​ನಿಗಾಗಿ ಹುಡುಕಾಟ ನಡೆಸಿದ್ದಾರೆ. : - - -:- – .