ರಾಜ್ಯಪಾಲರ ಪ್ರಾಸಿಕ್ಯೂಷನ್‌ : ಕೋರ್ಟ್‌ ನಲ್ಲಿ ಅರ್ಜಿ ವಿಚಾರಣೆಗೆ ಕ್ಷಣಗಣನೆ. ಬೆಂಗಳೂರು, ಆ.31,2024: (..) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ. ಕೋರ್ಟ್‌ ಕಲಾಪ ಆರಂಭಕ್ಕೆ ಕ್ಷಣಗಣನೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಕೆ. ನ್ಯಾ. ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ಇಂದು ಮುಂದುವರಿದ ಅರ್ಜಿ ವಿಚಾರಣೆ. ಬೆಳಿಗ್ಗೆ 10.30ಕ್ಕೆ ಅರ್ಜಿ ವಿಚಾರಣೆ. ಸಿಎಂ ಪರ ವಾದ ಮಂಡನೆ ಮಾಡಿರುವ ಖ್ಯಾತ ವಕೀಲ ಅಭಿಷೇಕ್ ಮನು ಸಿಂಗ್ವಿ. ರಾಜ್ಯಪಾಲರ ಪರ ಇಂದು ತುಷಾರ್ ಮೆಹತಾ ವಾದ ಮಂಡನೆ. ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಇದು ಮಹತ್ವದ ದಿನ. ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿಯುತ್ತ ನ್ಯಾಯಾಲಯ..? ಆಮೂಲಕ ಸಿಎಂ ಗೆ ಮುಳುವಾಗುತ್ತ ಮುಡಾ ಪ್ರಕರಣ.? ಎಂಬುದು ಒಂದು ಕಡೆಯಾದರೆ, ರಾಜ್ಯಪಾಲರ ಆದೇಶವನ್ನು ಕೋರ್ಟ್‌ ವಜಾಗೊಳಿಸುತ್ತಾ. ಆ ಮೂಲಕ ಸಿದ್ದರಾಮಯ್ಯ ಅವರ ಸಿಎಂ ಗಾದಿ ಸೇಫ್‌ ಆಗುತ್ತಾ ಎಂಬುದು ಮತ್ತೊಂದು ಕಡೆ. ಒಟ್ಟಾರೆ ತೀವ್ರ ಕುತೂಹಲ ಕೆರಳಿಸಿರುವ ಕೋರ್ಟ್‌ ನಡೆ. : ’ , , , , .