ನಾಳಿನ ಸರ್ವಪಕ್ಷ ಸಭೆಗೆ ಮಾಜಿ ಸಿಎಂಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಹ್ವಾನ. ಬೆಂಗಳೂರು, ಆಗಸ್ಟ್ 22,2023(..):ರಾಜ್ಯದಲ್ಲಿ ಮಳೆ ಕೊರತೆಯಾಗಿ ಬರದ ಛಾಯೆ ಎದುರಾಗಿದ್ದರೂ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು ಸರ್ಕಾರದ ಈ ನಡೆಯನ್ನ ಬಿಜೆಪಿ ಮತ್ತು ಜೆಡಿಎಸ್ ಖಂಡಿಸಿವೆ. ಈ ನಡುವೆ ಎಚ್ಚೆತ್ತ ಸರ್ಕಾರ, ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದು, ಸಭೆಗೆ ಮಾಜಿ ಸಿಎಂಗಳಿಗೆ ಸಿಎಂ ಸಿದ್ಧರಾಮಯ್ಯ ಆಹ್ವಾನ ನೀಡಿದ್ದಾರೆ. ವಿಧಾನಸೌಧದಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದ್ದು, ಸರ್ವಪಕ್ಷ ಸಭೆಗೆ ಮಾಜಿ ಸಿಎಂಗಳಾದ ಬಿಎಸ್​​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದ ಗೌಡ, ಹೆಚ್ ಡಿ ಕುಮಾರಸ್ವಾಮಿಗೂ ಆಹ್ವಾನ ನೀಡಲಾಗಿದೆ. ಪತ್ರದ ಮೂಲಕ ಬಿ.ಎಸ್​.ಯಡಿಯೂರಪ್ಪ, ಬೊಮ್ಮಾಯಿಗೆ ಆಹ್ವಾನಿಸಿದ್ದು ದೂರವಾಣಿ ಕರೆ ಮೂಲಕ ಡಿ.ವಿ.ಸದಾನಂದಗೌಡರಿಗೆ ಆಹ್ವಾನ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಸ್ಥಾನ ಇಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. : - - - -- - .