ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿರುತ್ತೆ: ಯಾರೇ ಬಂದ್ರೂ ಸ್ವಾಗತ- ಸಚಿವ ಹೆಚ್.ಸಿ ಮಹದೇವಪ್ಪ. ಮೈಸೂರು,ಆಗಸ್ಟ್,22,2023(..):ವಲಸೆ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ, ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿರುತ್ತೆ. ಪಕ್ಷಕ್ಕೆ ಯಾರೇ ಬಂದ್ರೂ ಸ್ವಾಗತ ಎಂದು ತಿಳಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಪಕ್ಷ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ. ನಾವು ಮನೆ ಮನೆಗೆ ಹೋಗಿ ಅವರನ್ನ ಬನ್ನಿ ಅಂತಾ ಕರೆಯುತ್ತಿಲ್ಲ. ಎಸ್ ಟಿ ಸೋಮಶೇಖರ್ ಪಕ್ಷಕ್ಕೆ ಬರುವ ವಿಚಾರ ಗೊತ್ತಿದೆ. ಅಪರೇನ್ ಕಾಂಗ್ರೆಸ್ ಪ್ರಶ್ನೆಯೇ ಇಲ್ಲ ಎಂದರು. ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಸಹ ಪಕ್ಷಕ್ಕೆ ಬರಬಹುದು ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು. : – - – - .