ಲಡಾಖ್’ ಬಳಿ ಸೇನಾ ವಾಹನ ಕಂದಕಕ್ಕೆ ಪಲ್ಟಿ, 9 ಯೋಧರು ಮೃತ: ಪ್ರಧಾನಿ, ರಾಷ್ಟ್ರಪತಿ ಸಂತಾಪ ಬೆಂಗಳೂರು, ಆಗಸ್ಟ್ 20, 2023 (..):ಲಡಾಖ್’’ನ ಲೇಹ್ ನಗರದಲ್ಲಿ ಸೇನಾ ವಾಹನ ಕಂದಕಕ್ಕೆ ಪಲ್ಟಿಯಾದ ಪರಿಣಾಮ 9 ಯೋಧರು ಮೃತಪಟ್ಟಿದ್ದಾರೆ. ಮತ್ತೊಬ್ಬ ಯೋಧನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಡಖ್ ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದೆ. ಯೋಧರ ಪಡೆ ಕರು ಗ್ಯಾರಿಸನ್ನಿಂದ ಲೇಹ್ ಬಳಿ ಇರುವ ಕಯಾರಿ ಪ್ರದೇಶಕ್ಕೆ ಹೋಗುತ್ತಿರುವಾಗ ಸುಮಾರು 7 ಕಿ.ಮೀ ದೂರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದಿದೆ. ಘಟನೆ ಕುರಿತಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಟ್ವೀಟ್​ ಮಾಡಿದ್ದು, ಲಡಾಖ್ ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ವ್ಯಕ್ತಪಡಿಸಿದ್ದಾರೆ.