ಜೆಡಿಎಸ್ ಕೋರ್ ಕಮಿಟಿ ರಚನೆ: ಅಧ್ಯಕ್ಷರಾಗಿ ಶಾಸಕ ಜಿ.ಟಿ ದೇವೇಗೌಡ ಆಯ್ಕೆ. ಬೆಂಗಳೂರು,ಆಗಸ್ಟ್ 18,2023(..):ಮುಂದಿನ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿರುವ ಜೆಡಿಎಸ್ ಇಂದು ​ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಕೋರ್ ಕಮಿಟಿ 21 ಸದಸ್ಯರನ್ನ ಒಳಗೊಂಡಿದ್ದು, ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಅವರು ಜೆಡಿಎಸ್​ ಕೋರ್​ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವೈಎಸ್​​ವಿ ದತ್ತಾ ಅವರು ಜೆಡಿಎಸ್​​ ಕೋರ್​ ಕಮಿಟಿ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಾ.ರಾ.ಮಹೇಶ್, ಹೆಚ್.ಕೆ‌.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶಂಪುರ, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಆಲ್ಕೋಡ್ ಹನುಮಂತಪ್ಪ, ಬಿ‌.ಎಂ.ಫಾರೂಕ್, ರಾಜುಗೌಡ, ನೇಮಿರಾಜ್ ನಾಯ್ಕ್, ಎಂ.ಕೃಷ್ಣರೆಡ್ಡಿ, ದೊಡ್ಡಪ್ಪಗೌಡ .ಪಾಟೀಲ್, ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ, ಪ್ರಸನ್ನ ಕುಮಾರ್, ಸುನಿತಾ ಚೌಹಾಣ್​​, ಸಿ.ವಿ.ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಜೆಡಿಎಸ್ ಕೋರ್ ಕಮಿಟಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. : - - - - - – .