ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ- ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ, ಆಗಸ್ಟ್,30,2024 (..):ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ. ಇನ್ನು ಬಿವೈ ವಿಜಯೇಂದ್ರ ಹೇಳಿದಾಕ್ಷಣ ರಾಜೀನಾಮೆ ಕೊಡಬೇಕಾ..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ ಹೇಳಿದರೇ ನಾನು ರಾಜೀನಾಮೆ ಕೊಡಬೇಕಾ? ಹಾಗೆ ನೋಡಿದರೇ ವಿಜಯೇಂದ್ರನೇ ರಾಜೀನಾಮೆ ಕೊಡಬೇಕು ಎಂದರು. ಮುಡಾ ಕೇಸ್ ನಲ್ಲಿ ನಾನು ತಪ್ಪೇ ಮಾಡಿಲ್ಲ. ನಾಳೇ ನಮ್ಮ ಸಂಸದರು, ಶಾಸಕರು ಎಂಎಲ್ ಸಿಗಳು ರಾಜ್ಯಪಾಲರನ್ನ ಭೇಟಿಯಾಗುತ್ತಾರೆ. ಮುರುಗೇಶ್ ನಿರಾಣಿ, ಹೆಚ್.ಡಿಕೆ, ಜನಾರ್ಧನ ರೆಡ್ಡಿ ವಿರುದ್ದ ಪ್ರಾಸಿಕ್ಯೂಷನ್ ಗೆ ಒತ್ತಾಯ ಮಾಡುತ್ತಾರೆ. ಕುಮಾರಸ್ವಾಮಿ ವಿರುದ್ದ ತನಿಖೆ ಆಗಿ ಚಾರ್ಜ್ ಶೀಟ್ ಹಾಕಲಾಗಿದೆ. ಆದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿಲ್ಲ ಎಂದು ಕಿಡಿಕಾರಿದರು. : , , ,