ಬಿಜೆಪಿಯ ಒಳಜಗಳ ನೋಡಿದ್ರೆ ಆ ಪಕ್ಷದಲ್ಲಿ ಯಾರೂ ಇರಲ್ಲ-ಸಚಿವ ಶಿವರಾಜ್ ತಂಗಡಗಿ ಕೊಪ್ಪಳ,ಆಗಸ್ಟ್,16,2023(..):ಬಿಜೆಪಿಯ ಒಳಜಗಳ ನೋಡಿದರೆ ಆ ಪಕ್ಷದಲ್ಲಿ ಯಾರೂ ಇರಲ್ಲ ಎಂದು ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ. ಕಾಂಗ್ರೆಸ್ ಪಕ್ಷಕ್ಕೆ ಬಾಂಬೆ ಬಾಯ್ಸ್, ಕೋಲ್ಕತ್ತಾ ಬಾಯ್ಸ್ ಯಾರು ಬರುತ್ತಾರೆ ಗೊತ್ತಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಹೇಳಿದರು. ನಮ್ಮ ಯೋಜನೆಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನರು ಮತ್ತೆ ಕಾಂಗ್ರೆಸ್ ಗೆ ಅಧಿಕಾರ ಕೊಡುತ್ತಾರೆಂದು ತಿಳಿದು ಪಕ್ಷಕ್ಕೆ ಬರಲು ಮುಂದಾಗಿದ್ದಾರೆ ಎಂದರು. ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವ ಶಿವರಾಜ ತಂಗಡಗಿ, ಹೆಚ್ ಡಿಕೆ ನಾನೇ ಕಿಂ‍ಗ್ ಮೇಕರ್ ಎಂದುಕೊಂಡಿದ್ರು. ಆದರೆ ಹೆಚ್.ಡಿಕೆ ನಿರೀಕ್ಷೆಯನ್ನ ಜನರು ಹುಸಿಗೊಳಿಸಿದ್ದಾರೆ ಎಂದು ಲೇವಡಿ ಮಾಡಿದರು. : --- -