ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 30 ಚಿನ್ನದ ಬಿಸ್ಕೆಟ್​ ಗಳು ಜಪ್ತಿ. ಬೆಂಗಳೂರು,ಆಗಸ್ಟ್,16,2023(..):ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 30 ಚಿನ್ನದ ಬಿಸ್ಕೆಟ್​ ಗಳನ್ನ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೋಲ್ಕತ್ತಾದಿಂದ ಬೆಂಗಳೂರು ಏರ್ ಪೋರ್ಟ್ ಗೆ ಪ್ರಯಾಣಿಕ ಬಂದಿಳಿದಿದ್ದನು. ಈ ವೇಳೆ ಅನುಮಾನಗೊಂಡು ವ್ಯಕ್ತಿಯನ್ನ ತಪಾಸಣೆ ನಡೆಸಿದ್ದು ಅಕ್ರಮವಾಗಿ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದು ಕಂಡು ಬಂದಿದೆ. ತಕ್ಷಣ ಕಸ್ಟಮ್ ಅಧಿಕಾರಿಗಳು ವ್ಯಕ್ತಿಯಿಂದ 36 ಲಕ್ಷ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್​ಗಳನ್ನು ಜಪ್ತಿಮಾಡಿ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. : 30 - - – .