ಮಗಳ ಹುಟ್ಟುಹಬ್ಬ ಆಚರಿಸಲು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು. ಮೈಸೂರು, ಆಗಸ್ಟ್ 15,2023(..):ಮಗಳ ಹುಟ್ಟುಹಬ್ಬಕ್ಕಾಗಿ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಸುರೇಶ್ (42) ಮೃತಪಟ್ಟ ಯೋಧ.ಜಮ್ಮುಕಾಶ್ಮೀರ ವಾಡಿ ಸೆಕ್ಟರ್‌ ನಲ್ಲಿ ನಾಯಕ್ ಸುಬೇದಾರ್ ಆಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದರು. ಸುರೇಶ್ ಕಳೆದ 19 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪುತ್ರಿ ಪ್ರಕೃತಿಯ 5 ನೇ ವರ್ಷದ ಹುಟ್ಟುಹಬ್ಬ ಆಚರಿಸಲು ಯೋಧ ಸುರೇಶ್ ರಜೆ ಪಡೆದು ಹೊಸ ಅಗ್ರಹಾರ ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲದೆ, ಜನ್ಮದಿನಾಚರಣೆ ಅಂಗವಾಗಿ ಡೋರ್ನಹಳ್ಳಿಯ ಅನಾಥಾಶ್ರಮಕ್ಕೆ ಊಟ ನೀಡಲೆಂದು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸುರೇಶ್ ಕೊನೆಯುಸಿರೆಳೆದಿದ್ದಾರೆ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ಸುರೇಶ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. : - – -