ಕಾಂಗ್ರೆಸ್ ಶಾಸಕನ ವಿರುದ್ಧ ಸ್ಟೇಟಸ್ ಹಾಕಿದ ಆರೋಪ: ಮಹಿಳಾ ಕಾನ್ಸ್ ​​ಟೇಬಲ್ ಸಸ್ಪೆಂಡ್. ಚಿಕ್ಕಮಗಳೂರು,ಆಗಸ್ಟ್,12,2023(..):ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರ ಕಾಂಗ್ರೆಸ್ ಶಾಸಕ ಆನಂದ್​​​ ವಿರುದ್ಧ ಸ್ಟೇಟಸ್​​​ ಹಾಕಿದ ಆರೋಪದ ಮೇಲೆ ಕಡೂರು ಪೊಲೀಸ್ ಠಾಣೆ ಮಹಿಳಾ ಕಾನ್ಸ್​​ಟೇಬಲ್​​​ ಅಮಾನತು ಮಾಡಲಾಗಿದೆ. ಕಡೂರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್​​ಟೇಬಲ್ ಲತಾ ಅಮಾನತಾದವರು. ಶಾಸಕ ಆನಂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳಾ ಕಾನ್ಸ್ ಟೇಬಲ್ ಲತಾ, ನನಗೆ ಏನಾದರೂ ತೊಂದರೆಯಾದರೆ ಕಡೂರು ಶಾಸಕ ಕಾರಣ. ಕಡೂರು ಶಾಸಕರಿಗೆ ನನ್ನ ಧಿಕ್ಕಾರ ಎಂದು ವಾಟ್ಸ್​​​ಆ್ಯಪ್ ಸ್ಟೇಟಸ್​​​ನಲ್ಲಿ ಉಲ್ಲೇಖಿಸಿದ್ದರು. ಈ ಮಧ್ಯೆ, ಶಾಸಕ ಆನಂದ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಿಳಾ ಕಾನ್ಸ್ ಟೇಬಲ್ ಲತಾರನ್ನ ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶ ಹೊರಡಿಸಿದ್ದಾರೆ. : – - - – -.