ತಾಕತ್ ಇದ್ರೆ ನಿಮ್ಮ ಮೇಲಿರುವ ಆರೋಪಗಳನ್ನ ತನಿಖೆಗೆ ವಹಿಸಿ- ಮಾಜಿ ಸಚಿವ ಅಶ್ವಥ್ ನಾರಾಯಣ್. ಬೆಂಗಳೂರು,ಆಗಸ್ಟ್,11,2023(..):ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕುರಿತು ಮಾತನಾಡಿರುವ ಮಾಜಿ ಸಚಿವ ಅಶ್ವಥ್ ನಾರಾಯಣ್, ತಾಕತ್ ಇದ್ದರೇ ನಿಮ್ಮ ಮೇಲಿನ ಆರೋಪಗಳನ್ನೂ ತನಿಖೆಗೆ ವಹಿಸಿ ಎಂದು ಸರಕಾರಕ್ಕೆ ಸವಾಲು ಹಾಕಿದರು. ಈ ಕುರಿತು ಇಂದು ಮಾತನಾಡಿದ ಅಶ್ವಥ್ ನಾರಾಯಣ್, ನಾವು ಯಾರನ್ನೂ ಎತ್ತಿ ಕಟ್ಟುವ ಕೆಲಸ ಮಾಡುವುದಿಲ್ಲ. ಸರ್ಕಾರದ ಮೇಲೆ ಜವಾಬ್ದಾರಿ ಇದೆ. ಗುತ್ತಿಗೆದಾರರಿಗೆ ನಿಮ್ಮ ಪರವಾಗಿ ಇರುತ್ತೇವೆ ಎಂದು ನಾವು ಹೇಳುವುದಿಲ್ಲ. ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾಗ ಇಂತ ವ್ಯಕ್ತಿ ಅಂತ ಎಲ್ಲೂ ಹೇಳಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್​ ಹಣಕ್ಕೆ ಡಿಮ್ಯಾಂಡ್ ಇಟ್ಟಿರೋದನ್ನು ಗುತ್ತಿಗೆದಾರರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ನಮ್ಮ ಮೇಲೆ ಮಾಡಿದ್ದ 40% ಆರೋಪವನ್ನೂ ತನಿಖೆಗೆ ಕೊಡಲಿ. ಇವರ ಕಾಲದಲ್ಲಿ ಆಗುತ್ತಿರುವ ಇರುವ ಆರೋಪಗಳೂ ತನಿಖೆಯಾಗಲಿ ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದರು. : - – - - .