ಬಿಲ್ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ: ಗುತ್ತಿಗೆದಾರರು ಕಮಿಷನ್ ಬಗ್ಗೆ ಮಾತನಾಡಿಲ್ಲ- ಸಚಿವ ಹೆಚ್.ಕೆ ಪಾಟೀಲ್. ಬೆಂಗಳೂರು,ಆಗಸ್ಟ್,10,2023(..):ಗುತ್ತಿಗೆದಾರರು ಸರ್ಕಾರದ ವಿರುದ್ಧ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಕಮಿಷನ್ ಬಗ್ಗೆ ಅವರು ಮಾತನಾಡಿಲ್ಲ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು. ಸರ್ಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರ ಕುರಿತು ಮಾತನಾಡಿದ ಸಚಿವ ಹೆಚ್​ಕೆ ಪಾಟೀಲ್, ಬಿಲ್ ಬಿಡುಗಡೆ ಆಗಿಲ್ಲ ಅಂತಾ ಗುತ್ತಿಗೆದಾರರು ಆರೋಪಿಸಿದ್ದಾರೆ. ಕಮಿಷನ್​​ ಬಗ್ಗೆ ಎಲ್ಲೂ ಗುತ್ತಿಗೆದಾರರು ಮಾತಾಡಿಲ್ಲ. ಗುತ್ತಿಗೆದಾರರ ಆರೋಪಕ್ಕೆ ಸಂಬಂಧಪಟ್ಟ ಸಚಿವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಂದ ನಮ್ಮ ವಿಶ್ವಸಾರ್ಹತೆ ಹೆಚ್ಚುತ್ತಿದೆ ಎಂದರು. ಗುತ್ತಿಗೆದಾರರು ಆರೋಪ ಮಾಡಿದ್ದು ಸುಳ್ಳು. ಯಾವುದೇ ಆಧಾರರಹಿತ ಆರೋಪ ಮಾಡಿದರೆ ನಾನು ಖಂಡಿಸುತ್ತೇನೆ. ಕೃಷಿ ಸಚಿವರ ವಿರುದ್ಧ ಲೆಟರ್ ಬರೆದಿದ್ದು ಸುಳ್ಳು ಅಂತಾ ಗೊತ್ತಾಯ್ತು ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು. : - –- - - – - .