ಡಿವಿಜಿ ಪ್ರಶಸ್ತಿಗೆ ಸಾಹಿತಿ ಸತ್ಯೇಶ್ ಬೆಳ್ಳೂರ್ ಆಯ್ಕೆ ಮೈಸೂರು, ಆ.30,2024: (..) ಡಿವಿಜಿ ಬಳಗ ಪ್ರತಿಷ್ಢಾನದ ವತಿಯಿಂದ 2024 ನೇ ವರ್ಷದ ಪ್ರಶಸ್ತಿಗೆ ಕವಿ, ಸಾಹಿತಿ, ನಾಟಕಕಾರ ಹಾಗೂ ಮ್ಯಾನೇಜ್ಮೆಂಟ್ ಗುರು ಸತ್ಯೇಶ್ ಬೆಳ್ಳೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನವು ಕಳೆದ ಎಂಟು ವರ್ಷಗಳಿಂದ ಡಿವಿಜಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ಈ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ ಕೆ ಸಿ ಶಿವಪ್ಪ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸಪ್ಟೆಂಬರ್ 15 ರಂದು ಬೆಳಗ್ಗೆ 10.30 ಕ್ಕೆ ಮೈಸೂರಿನ ಕೃಷ್ಣಮೂರ್ತಿಪುರಂ ನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಇದೇ ವೇಳೆ ಡಾ. ಗುರುರಾಜ ಕರಜಗಿಯವರ ಪುಸ್ತಕ ಸಾಕ್ಷಿ ಹಾಗೂ ಸತ್ಯೇಶ್ ಬೆಳ್ಳೂರ್ ಅವರ ಕೃಷ್ಣಲೀಲೆ ಮತ್ತು ನಾನು ಹಾಗೂ ಚಾಣಕ್ಯ ಯುವಜನತೆಗೆ ಮಾಣಿಕ್ಯ ಪುಸ್ತಕ ಬಿಡುಗಡೆಯಾಗಲಿದೆ. ಬಳಿಕ ಡಾ. ಗುರುರಾಜ ಕರಜಗಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಕನಕರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : , , ,