ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ ಸಿಎಸ್’ ಅಭಿಯಾನ: ಬಿಜೆಪಿ ಕಾರ್ಯಕರ್ತರ ಬಂಧನ. ಮಂಡ್ಯ, ಆಗಸ್ಟ್,10,2023(..):ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪಿಸಿ ಕಾಂಗ್ರೆಸ್​ ಸೃಷ್ಟಿ ಮಾಡಿದ್ದ ಪೇಸಿಎಂ ಅಭಿಯಾನವನ್ನ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಅದೇ ಅಸ್ತ್ರವನ್ನ ಬಿಜೆಪಿ ಪ್ರಯೋಗಿಸಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸಿದ್ದಾರೆ. ಪೇಸಿಎಂ ಅಭಿಯಾನದ ರೀತಿಯಲ್ಲೇ ಪೇಸಿಎಸ್​ ಕ್ಯೂಆರ್​ ಕೋಡ್​ ರಚನೆ ಮಾಡಿ, ಅದಕ್ಕೆ ಚಲುವರಾಯಸ್ವಾಮಿ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, ಮಂಡ್ಯದ ಹಲವೆಡೆಯೂ ಪೇಸಿಎಸ್ ಪೋಸ್ಟರ್ ಅನ್ನು ಅಂಟಿಸಲಾಗಿದೆ. ಈ ನಡುವೆ ಪೋಸ್ಟರ್ ಅನ್ನು ಪೊಲೀಸರು ಕಿತ್ತು ಹಾಕಿದ್ದು ಪ್ರತಿಭಟನಾ ವೇಳೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಂಡ್ಯದ ಎಎಸ್ಪಿ ತಮ್ಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಗ್ರೂಪ್ ನಿಂದಲೂ ಕೃಷಿ ಸಚಿವ ಚೆಲುವರಾಯಸ್ವಾಮಿ‌ ವಿರುದ್ಧ ಪೇ ಸಿಎಸ್() ಅಭಿಯಾನ ಆರಂಭವಾಗಿದೆ. ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ದಾರಾಳವಾಗಿ ಸ್ಕ್ಯಾನ್ ಮಾಡಿ ಲಂಚ ಪಾವತಿ ಮಾಡಿ. ಧನ್ಯವಾದಗಳು, ಇಂತಿ ನಿಮ್ಮ ಭ್ರಷ್ಟ ಚೆಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಟ್ಯಾಗ್ ಲೈನ್ ಹಾಕಿದ್ದಾರೆ. : ‘ ’- –- –- –