ನಾಳೆ ಬೆಂಗಳೂರಿಗೆ ಸ್ಪಂದನಾ ಮೃತದೇಹ: ಬುಧವಾರ ಅಂತ್ಯಕ್ರಿಯೆ-ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ. ಬೆಂಗಳೂರು,ಆಗಸ್ಟ್,7,2023(..):ಥೈಲ್ಯಾಂಡ್​ನಲ್ಲಿ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಗಿದಿದೆ. ನಾಳೆ ಬೆಂಗಳೂರಿಗೆ ಮೃತದೇಹ ಆಗಮಿಸಲಿದ್ದು, ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸ್ಪಂದನಾ ಅವರ ಚಿಕ್ಕಪ್ಪ ಹಾಗೂ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಬಿ.ಕೆ ಹರಿಪ್ರಸಾದ್, ನಾಳೆ ರಾತ್ರಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿದೆ. ಬುಧವಾರ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆಗೆ ಇನ್ನೂ ಜಾಗ ಗುರುತಿಸಿಲ್ಲ. ಅಂತ್ಯಕ್ರಿಯೆ ಸ್ಥಳ ಬಗ್ಗೆ ವಿಜಯ್​ರಾಘವೇಂದ್ರ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದಾರೆ. : - – –- - -