ಮೈಸೂರು ದಸರಾ 2023: ಸೆಪ್ಟಂಬರ್ 1ಕ್ಕೆ ಗಜಪಯಣ ಸಮಾರಂಭ. ಮೈಸೂರು,ಆಗಸ್ಟ್,7,2023(..): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಸೆಪ್ಟಂಬರ್ 1ಕ್ಕೆ ಗಜಪಯಣ ಸಮಾರಂಭ ನಡೆಯಲಿದ್ದು ಗಜಪಡೆಯ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಲಿದೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ, ಅಭಿಮನ್ಯು ನೇತೃತ್ವದ ಮೊದಲ ತಂಡದ ಗಜಪಡೆ ಸೆಪ್ಟೆಂಬರ್ 1ಕ್ಕೆ ಮೈಸೂರಿನತ್ತ ಹೆಜ್ಜೆ ಹಾಕಲಿದ್ದು, ಗಜಪಯಣ ಸಮಾರಂಭದ ಬಳಿಕ ಲಾರಿಗಳ ಮೂಲಕ ಮೈಸೂರಿನತ್ತ ಅಭಿಮನ್ಯು ಅಂಡ್ ಟೀಮ್ ಆಗಮಿಸಲಿದೆ ಎಂದಿದ್ದಾರೆ. ದಸರಾ ಆಚರಣೆ ಕುರಿತು ಈಗಾಗಲೇ ಹೈ ಪವರ್ ಕಮಿಟಿ ಸಭೆ ನಡೆದಿದೆ. ಜಿಲ್ಲಾಡಳಿತವು ಸಹ ದಸರಾ ಆಚರಣೆಗೆ ಸಿದ್ಧತೆ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ನವರ ನೇತೃತ್ವದಲ್ಲಿ ಮೈಸೂರಿನಲ್ಲಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಸ್ಥಳೀಯ ಶಾಸಕರು,ಜಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ತಿಳಿಸಿದರು. : 2023: - – 1.