ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರನ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಆನ್’ಲೈನ್ ಖದೀಮ ! ಮೈಸೂರು, ಆಗಸ್ಟ್ 05, 2023 (..): ದಿನೇ ದಿನೇ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಆನ್‌ಲೈನ್ ಮೂಲಕ ಎಂಎಲ್‌ಸಿ ಎಚ್.ವಿಶ್ವನಾಥ್ ಪುತ್ರನ ಖಾತೆಗೆ ವಂಚಕರು ಕನ್ನ ಹಾಕಿದ್ದಾರೆ. ಎಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕಿದ್ದಾರೆ. ಅಪರಿಚತನೊಬ್ಬ ವಂಚಿಸಿ 1.99 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದ ಅಮಿತ್ ಅವರ ಖಾತೆಯಿಂದ ದೊಡ್ಡ ಮೊತ್ತದ ಹಣವನ್ನು ಎಗರಿಸಲಾಗಿದೆ. ಹಣ ಬಾರದ ಹಿನ್ನೆಲೆ ಕಸ್ಟಮರ್ ಕೇರ್ ನಂಬರ್‌‌ಗೆ ಕರೆ ಮಾಡಿದಾಗ ಈ ವಂಚನೆ ಆಗಿದೆ. ಗೂಗಲ್‌ನಲ್ಲಿ ನಂಬರ್ ಹುಡುಕಿ ಕರೆ ಮಾಡಿದ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ವಿವರ ಪಡೆದು ಹಣ ಲಪಟಾಯಿಸಿದ್ದಾನೆ. ಈ ಕುರಿತು ಸೈಬರ್ ಠಾಣೆಗೆ ಅಮಿತ್ ದೇವರಹಟ್ಟಿ ದೂರು ನೀಡಿದ್ದಾರೆ. ಜುಲೈ 28 ರಂದು ಈ ಘಟನೆ ನಡೆದಿದೆ ಎಂದು ‘ಜಸ್ಟ್ ಕನ್ನಡ’ಗೆ ಅಮಿತ್ ಮಾಹಿತಿ ನೀಡಿದ್ದಾರೆ.