ಐದು ದಿನಗಳ ಕಾಲ ಪಾಸ್ ಪೋರ್ಟ್ ಸೇವಾ ಪೋರ್ಟೆಲ್ ಸ್ಥಗಿತ ನವದೆಹಲಿ,ಆಗಸ್ಟ್,29,2024 (..):ತಾಂತ್ರಿಕ ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಪಾಸ್ ಪೋರ್ಟ್ ಸೇವಾ ಪೋರ್ಟೆಲ್ ಸ್ಥಗಿತಗೊಳ್ಳಲಿದೆ. ಇಂದು ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2 ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಟೆಕ್ನಿಕಲ್ ಮೈಂಟೆನೆನ್ಸ್​ ನಿಂದಾಗಿ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುತ್ತದೆ.. ಆಗಸ್ಟ್ 30ರಂದು ನೀಡಲಾಗಿರುವ ಎಲ್ಲಾ ಅಪಾಯಿಂಟ್ಮೆಂಟ್ ​ಗಳನ್ನು ರದ್ದು ಮಾಡಲಾಗಿದೆ. ಅಪಾಯಿಂಟ್ಮೆಂಟ್ ಪಡೆದಿರುವ ಅಭ್ಯರ್ಥಿಗಳಿಗೆ ಮುಂದಿನ ದಾರಿಗಳ ಬಗ್ಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಪಾಸ್​ಪೋರ್ಟ್ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್​ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ. ಆಗಸ್ಟ್ 30ಕ್ಕೆ ಬುಕ್ ಆಗಿರುವ ಅಪಾಯಿಂಟ್​ಗಳನ್ನು ಬೇರೆ ದಿನಕ್ಕೆ ನಿಗದಿ ಮಾಡಿ, ಅರ್ಜಿದಾರರಿಗೆ ಅದರ ಮಾಹಿತಿ ಅಪ್​ಡೇಟ್ ಮಾಡಲಾಗುತ್ತದೆ ಎಂದು ಅಡ್ವೈಸರಿ ಬಿಡುಗಡೆ ಮಾಡಲಾಗಿದೆ. : , ,