ಈ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಿಟ್ಟು ಬೇರೆ ಕೆಲಸ ಇಲ್ಲ- ಮಾಜಿ ಸಚಿವ ಬಿ.ಸಿ.‌ನಾಗೇಶ್ ವಾಗ್ದಾಳಿ. ಬೆಂಗಳೂರು,ಆಗಸ್ಟ್,3,2023(..):ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಈ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಿಟ್ಟು ಬೇರೆ ಕೆಲಸ ಇಲ್ಲ ಎಂದು ಮಾಜಿ ಸಚಿವ ಬಿ.ಸಿ.‌ನಾಗೇಶ್ ವಾಗ್ದಾಳಿ ನಡೆಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್, ಸರ್ಕಾರ ಎಲ್ಲ ಹಂತದಲ್ಲೂ ವರ್ಗಾವಣೆಯಲ್ಲಿ ಭಾಗಿಯಾಗಿದೆ. ಶಾಸಕರು ಅಸಮಧಾನ ತೋಡಿಕೊಂಡಿರೋದು ಎಲ್ಲರಿಗೂ ಅರ್ಥ ಆಗುತ್ತೆ ಎಂದು ಕಿಡಿಕಾರಿದರು. ಸಚಿವರು ಅವರವರೇ ಮಾತಾಡಿಕೊಂಡು ವರ್ಗಾವಣೆ ಮಾಡ್ಕೊಳ್ತಿದಾರೆ. ಡಿ ದರ್ಜೆ ನೌಕರರನ್ನೂ ಬಿಡದಂತೆ ವರ್ಗಾವಣೆ ದಂಧೆ ನಡೆಯುತ್ತಿದೆ. ಇದರ ಬಗ್ಗೆ ನಾವು ಮಾತಾಡಿದರೆ ಸಾಕ್ಷ್ಯ ತನ್ನಿ ಎನ್ನುತ್ತಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆಗೆ ಏಜೆಂಟರು ಹುಟ್ಟಿಕೊಳ್ಳುತ್ತಿದ್ದಾರೆ. ಈ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಿಟ್ಟು ಬೇರೆ ಕೆಲಸ ಇಲ್ಲ. ಶಿಕ್ಷಕರ ಅನೇಕ ಸಮಸ್ಯೆಗಳು ನ್ಯಾಯಾಲಯದಲ್ಲಿವೆ ಎಂದರು. : – - - - --