ಮೊಬೈಲ್ ಚಾರ್ಜರ್​​ ವೈರ್​ನಿಂದ ಶಾಕ್ ಹೊಡೆದು 8 ತಿಂಗಳ ಮಗು ಸಾವು. ಉತ್ತರ ಕನ್ನಡ,ಆಗಸ್ಟ್,2,2023(..):ಮೊಬೈಲ್ ಚಾರ್ಜರ್‌ನಿಂದ ಶಾಕ್ ಹೊಡೆದು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ. ಪೋಷಕರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ 8 ತಿಂಗಳ ಮಗು ಸಾನಿಧ್ಯ ವಿದ್ಯುತ್ ಶಾಕ್‌ಗೆ ಬಲಿಯಾಗಿರುವುದು. ಮೊಬೈಲ್​ ಚಾರ್ಜ್​ಗೆ ಹಾಕಿ ಪೋಷಕರು ಆಫ್​ ಮಾಡದೇ ಇಟ್ಟಿದ್ದರು. ಈ ವೇಳೆ ಆನ್ ​ಇದ್ದ ಚಾರ್ಜರ್ ಅ​ನ್ನು​ ಮಗು ಬಾಯಲ್ಲಿಟ್ಟುಕೊಂಡಿದ್ದು ಈ ಸಮಯದಲ್ಲಿ ಶಾಕ್​ನಿಂದ ಮಗು ಕೊನೆಯುಸಿರೆಳದಿದೆ. ಮಗುವಿನ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : 8 - - – - -