11 ಪೊಲೀಸ್ ಇನ್ಸ್ ಪೆಕ್ಟರ್ಸ್ ಮತ್ತು 7 ಎಸಿಪಿಗಳ ವರ್ಗಾವಣೆಗೆ ತಡೆ ನೀಡಿದ ಸರ್ಕಾರ ಬೆಂಗಳೂರು,ಆಗಸ್ಟ್ ,2,2023(..):ಕಾಂಗ್ರೆಸ್​ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಜೋರಾಗಿದ್ದು, ನಿನ್ನೆ ವರ್ಗಾವಣೆಗೊಂಡಿದ್ದ 211 ಪೊಲೀಸ್ ಇನ್ಸ್​​ಪೆಕ್ಟರ್ ​ಗಳ ಪೈಕಿ 11 ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಇಂದು ಸರ್ಕಾರ ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ಬರೋಬ್ಬರಿ 211 ಇನ್ಸ್​ಪೆಕ್ಟರ್ ​ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ ​​ಪೆಕ್ಟರ್​ ಗಳ ವರ್ಗಾವಣೆಯನ್ನು ಸರ್ಕಾರ ಏಕಾಏಕಿ ಇಂದು ತಡೆ ಹಿಡಿದಿದೆ. ಬಹುತೇಕ ಜಿಲ್ಲೆ, ಸಿಸಿಬಿ , ಗುಪ್ತ ವಾರ್ತೆಯ ಪೊಲೀಸ್ ಇನ್ ಸ್ಪೆಕ್ಟರ್‌ ಗಳ ವರ್ಗಾವಣೆ ಆಗಿತ್ತು. ಇದರಲ್ಲಿ ಇದೀಗ ಕೆಲವರ ವರ್ಗಾವಣೆಯನ್ನು ದಿಢೀರ್ ತಡೆ ಹಿಡಿದಿದೆ. ಇನ್ನು ಜುಲೈ 31 ರಂಧು 45 ಎಸಿಪಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು ಇದೀಗ ಈ ಪೈಕಿ 7 ಎಸಿಪಿಗಳ ವರ್ಗಾವಣೆಗೆ ತಡೆ ನೀಡಿದೆ ಎನ್ನಲಾಗಿದೆ. : - - – 11 – 7