ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್: ದೂರು ದಾಖಲು ಬೆಂಗಳೂರು, ಜುಲೈ 30, 2023 (..): ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಿಗಳ ವಿರುದ್ಧ ಭಟ್ಕಳಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹೊನ್ನಾವರ ಫ್ರೆಂಡ್ಸ್‌ ಗ್ರೂಪ್‌ ಇನ್‌ ಎಂಎಸ್‌ವಿ ಮೀಡಿಯಾ’ ಮತ್ತು ‘ಯಂಗ್‌ ಒನ್‌ ಇಂಡಿಯಾ’ ವಿರುದ್ಧ ಬಿಜೆಪಿ ಮಂಡಲಾಧ್ಯಕ್ಷರು ದೂರು ನೀಡಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಅವಹೇಳನ ಪೋಸ್ಟ್ ಹಾಕಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲ್ಲಿನ ಬಿಜೆಪಿ ಮಂಡಳದ ವತಿಯಿಂದ ದೂರು ದಾಖಲಿಸಲಾಗಿದೆ. ದೇಶದ ಪ್ರಧಾನಿ ವಿರುದ್ಧ ಇಂತಹ ಅವಮಾನಕರ ಕೃತ್ಯ ನಡೆಸುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.