ಅಭಿವೃದ್ಧಿಗೆ ಹಣ ಇಲ್ಲ ಎಂದ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ. ಬೆಂಗಳೂರು,ಜುಲೈ,27,2023(..):ಐದು ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುತ್ತಿರುವ ಹಿನ್ನೆಲೆ , ಆರ್ಥಿಕ ಅಡಚಣೆ ಉಂಟಾಗಿದ್ದು ಈ ವರ್ಷ ಅಭಿವೃದ್ದಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕದ ಅಭಿವೃದ್ಧಿ ಇಲ್ಲ. ಅಧಿಕಾರದ ಹಸಿವಿನಿಂದ ಆಶ್ವಾಸನೆ ಕೊಟ್ಟು ಅವುಗಳನ್ನು ಪೂರೈಸಲೂ ಆಗದೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ ಸರ್ಕಾರಕ್ಕೆ ದೂರದೃಷ್ಟಿಯೂ ಇಲ್ಲ ಜವಾಬ್ದಾರಿಯೂ ಇಲ್ಲ ಎಂದು ಕಿಡಿಕಾರಿದ್ದಾರೆ. : - –- -