‘ಯಜಮಾನ’ನಿಲ್ಲದ ಮನೆಯಂತಾದ ಮೈಸೂರು ವಿವಿ!: ನಾಳೆ ಸಂಸ್ಥಾಪನಾ ದಿನಾಚರಣೆ ಮೈಸೂರು, ಜುಲೈ 26, 2023 (..):ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ವಿಶ್ವ ವಿದ್ಯಾನಿಲಯ ಈಗ ಯಜಮಾನನಿಲ್ಲದ ಮನೆಯಂತಾಗಿದೆ! ನಾಳೆ ಮೈಸೂರು ವಿಶ್ವ ವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಉಪಕುಲಪತಿಗಳಿಲ್ಲದೆ ಸಂಸ್ಥಾಪನಾ ದಿನಾಚರಣೆಗೆ ವಿಶ್ವವಿದ್ಯಾನಿಲಯ ಮುಂದಾಗಿದೆ. ಕ್ರಾಫರ್ಡ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಕಳೆದ 20-07-23 ರಂದು ಸಭೆ ನಡೆಸಿರುವ ವಿಶ್ವ ವಿದ್ಯಾನಿಲಯ ಕಾರ್ಯಸೌಧದ ಅಧಿಕಾರಿಗಳು ಸಂಸ್ಥಾಪನಾ ದಿನಾಚರಣೆಗೆ ನಿರ್ಧರಿಸಿದ್ದಾರೆ. ಈಗಾಗಲೇ ಸಂಭಂದ ಪಟ್ಟ ವಿಶ್ವ ವಿದ್ಯಾನಿಲಯದ ಎಲ್ಲಾ ವಿಭಾಗಗಳಿಗೂ ಸುತ್ತೋಲೆ ರವಾನೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವಂತೆ ಸುತ್ತೋಲೆ ನೀಡಲಾಗಿದೆ.