ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ : ಸರ್ಕಾರದಿಂದ ಪ್ರಕರಣ ಮುಚ್ಚಿಹಾಕಲು ಯತ್ನ- ಎಂಎಲ್ ಸಿ ರವಿಕುಮಾರ್. ಬೆಂಗಳೂರು,ಜುಲೈ,25,2023(..):ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಕದ್ದಮುಚ್ಚಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ ಆರೋಪ ಮೂವರು ಮುಸ್ಲೀಂ ವಿದ್ಯಾರ್ಥಿನೀಯರ ವಿರುದ್ದ ಕೇಳಿ ಬಂದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದ ಎಂಎಲ್ ಸಿ ರವಿಕುಮಾರ್ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಎಂಎಲ್ ಸಿ ರವಿಕುಮಾರ್, ಹಿಂದೂ ಹುಡುಗಿಯರ ವಿಡಿಯೋ ಮಾಡಿ ಗ್ರೂಪ್ ಗೆ ಹಾಕ್ತಾರೆ. ವಿಡಿಯೋ ಮಾಡಿದವರ ವಿರುದ್ದ ಏನು ಕ್ರಮ ಆಗಿದೆ . ವಿದ್ಯಾರ್ಥಿನೀಯರನ್ನ ಡಿಬಾರ್ ಮಾಡಿದ್ದಾರೆ ಅಷ್ಟೆ. ಘಟನೆ ಬೆಳಕಿಗೆ ತಂದ ರಶ್ಮಿ ಸಾಮಂತ್ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಪ್ರಕರಣವನ್ನ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ವಿಡಿಯೋ ಚಿತ್ರೀಕರಣ ಮಾಡಿದ ಮೂವರ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಜುಲೈ 27ಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಲಿದೆ ಎಂದು ರವಿಕುಮಾರ್ ತಿಳಿಸಿದರು. : – - – -.