ಹೈಕೋರ್ಟ್ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ. ಬೆಂಗಳೂರು,ಜುಲೈ,24,2023(..):ರಾಜ್ಯ ಹೈಕೋರ್ಟ್​ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನ್ಯಾಯಮೂರ್ತಿಗಳಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಸಂದೇಶ ರವಾನಿಸಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ . ಇದನ್ನು ದುಬೈ ಗ್ಯಾಂಗ್​ನಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೈಕೋರ್ಟ್​ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಮುರಳೀಧರ್​ಗೆ ಸಂದೇಶ ಬಂದಿದೆ. 50 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದ್ದು, ಅಲೈಡ್​​ ಬ್ಯಾಂಕ್ ಲಿಮಿಟೆಡ್​ನ‌ ಖಾತೆಯ ಸಂಖ್ಯೆಯನ್ನು ದುಷ್ಕರ್ಮಿಗಳು ನೀಡಿದ್ದಾರೆ. ಬೆದರಿಕೆ ಸಂಬಂಧ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ವಾಟ್ಸಪ್ ಸಂದೇಶದ ಆಧರಿಸಿ ಎಫ್​ಐಆರ್​ ದಾಖಲಿಸಲಾಗಿದೆ. : - – 6 –- .