ಮಾಜಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಸಿಐಡಿ ಶಿಫಾರಸ್ಸು: ಸಚಿವ ಚಲುವರಾಯಸ್ವಾಮಿ ಬೆಂಗಳೂರು, ಜುಲೈ 23, 2023 (..):ಕೆಎಸ್ ಆರ್ ಟಿಸಿ ನೌಕರ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನ್ನ ವರದಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ತಪ್ಪಿತಸ್ಥ ಎಂದು ಹೆಸರಿಸಿದೆ. ಮದ್ದೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. ನಾಗಮಂಗಲದಲ್ಲಿ ಒಂದಷ್ಟು ಹುಡುಗ್ರು ಕಟ್ಟಿಕೊಂಡು ಮಾಡಿದ ಅಕ್ರಮಗಳು ಬಯಲಾಗುತ್ತೆ ಅನ್ನೊ ಭಯದಲ್ಲಿ ಸುರೇಶ್ ಗೌಡ ಈ ರೀತಿ ಮಾಡ್ತಿದ್ದಾರೆ. ಸಿಐಡಿಗೂ ನಮಗೂ ಸಂಬಂಧವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನ್ನ ವರದಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ತಪ್ಪಿತಸ್ಥ ಎಂದು ಹೆಸರಿಸಿದ್ದು, ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.