ಸಿಎಂ ಸ್ಥಾನದ ಬಗ್ಗೆ ನಿರ್ಧಾರ ಮಾಡೋದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ -ಸಚಿವ ಜಮೀರ್ ಅಹ್ಮದ್ ಖಾನ್. ಮಂಡ್ಯ,ಜುಲೈ,22,2023(..):ಸಿಎಂ ಮಾಡೋದು ಗೊತ್ತು, ಕೆಳಗಿಳಿಸೋದು ಗೊತ್ತಿದೆ ಎಂದು ಹೇಳಿಕೆ ನೀಡಿದ ಸ್ವಪಕ್ಷದ ಎಂಎಲ್​ಸಿ ಬಿಕೆ ಹರಿಪ್ರಸಾದ್ ​ಗೆ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಮಾಡೋದು ಬಿಡೋದು ಅವರ ಕೈಲೂ ಇಲ್ಲ, ನನ್ನ ಕೈಲೂ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆ ನಿರ್ಧಾರವನ್ನು ಮಾಡುತ್ತಾರೆ ಎಂದರು. ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿ, ಜೆಡಿಎಸ್​ ನಡುವೆ ಹೊಂದಾಣಿಕೆ ಬಗ್ಗೆ ಅವರನ್ನೇ ಕೇಳಬೇಕು. ಜೆಡಿಎಸ್​​ ಪಕ್ಷದ ನಿರ್ಧಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು. : - - -- – -