ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬದವರೇ ಕಾರಣ- ಸಚಿವ ಚಲುವರಾಯಸ್ವಾಮಿ.. ಶಿವಮೊಗ್ಗ,ಜುಲೈ,21,2023(..):ಪ್ರತಿ ಚುನಾವಣೆಯಲ್ಲಿ ಕನಿಷ್ಠ 10 ಜನ ಜೆಡಿಎಸ್​ನಿಂದ ಹೊರ ಬರ್ತಿದ್ದಾರೆ. ಜೆಡಿಎಸ್ ಈ ಸ್ಥಿತಿಗೆ ಬರಲು ಅವರ ಕುಟುಂಬದವರೇ ಕಾರಣ, ನಾವಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲವೆಂದು ಜೆಡಿಎಸ್​ನಿಂದ ಹೊರಬಂದಿದ್ದೇವೆ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಲ್ಲ, ತಮ್ಮದೇ ಆಡಳಿತ ಎಂದು ತಿಳಿದುಕೊಂಡಿದ್ದರು. ಈಗ ಎಲ್ಲವೂ ರಿವರ್ಸ್ ಆಗುತ್ತಿದೆ, 7 ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿದ್ದೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ. ಯಾವ ಉದ್ದೇಶದಿಂದ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮಾಡಲಿ. ಹೊಸ ಸರ್ಕಾರ ಬಂದಾಗ ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ಚಲುವರಾಯಸ್ವಾಮಿ ಹೇಳಿದರು. : – – - – - -