ಗೃಹಲಕ್ಷ್ಮೀ ಯೋಜನೆ: ಬರೋಬ್ಬರಿ 7.77 ಲಕ್ಷ ಮಹಿಳೆಯರ ನೋಂದಣಿ ಬೆಂಗಳೂರು,ಜುಲೈ22, 2023 (..):ಗೃಹಲಕ್ಷ್ಮೀ ಯೋಜನೆ ನೋಂದಣಿಗೆ 2ನೇ ದಿನವಾದಂತ ಶುಕ್ರವಾರ ಬರೋಬ್ಬರಿ 7.77 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಶನಿವಾರ ಮತ್ತು ಭಾನುವಾರಗಳಂದೂ ಎಲ್ಲಾ ಸೇವಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ. 2ನೇ ದಿನದಂದು ಗೃಹಲಕ್ಷ್ಮೀ ಯೋಜನೆ ನೋಂದಣಿಗಾಗಿ ಮಹಿಳೆಯರು ಮುಗಿ ಬಿದ್ದಿದ್ದಾರೆ. ಹೀಗಾಗಿ ಸರ್ವಸ್ ಸಮಸ್ಯೆ ಕೂಡ ಆಗಿತ್ತು. ಜುಲೈ 19ರ ಬುಧವಾರ ಸಂಜೆ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದರು. ನೋಂದಣಿ ಆರಂಭವಾದ 2ನೇ ದಿನವೇ ದುಪ್ಪಟ್ಟು ನೋಂದಣಿಯಾಗಿದೆ.