ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ದಂಡಿಕೆರೆ ನಾಗರಾಜ್ ನೇಮಕ ಮೈಸೂರು,ಆಗಸ್ಟ್,28,2024 (..):ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಸಿಂಡಿಕೇಟ್ ಸದಸ್ಯರನ್ನಾಗಿ ವರುಣಾ ಹೋಬಳಿಯ ದಂಡಿಕೆರೆ ಗ್ರಾಮದ ದಂಡಿಕೆರೆ ನಾಗರಾಜ್ ಅವರನ್ನು ನಾಮ ನಿರ್ದೇಶನ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೂರು ವರ್ಷಗಳ ಅವಧಿಗೆ ಈ ಸದಸ್ಯತ್ವ ಜಾರಿಯಲ್ಲಿ ಇರಲಿದ್ದು ಶೈಕ್ಷಣಿಕ ನೀತಿ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಅವಕಾಶ ಸಿಗಲಿದೆ. ನಾಗರಾಜ್ ಅವರು ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ ಪದವೀಧರರಾಗಿದ್ದು, ಸುಮಾರು 25 ವರ್ಷಗಳಿಗೂ ಅಧಿಕ ಸಮಯದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣವು ಜನಸಾಮಾನ್ಯರಿಗೆ ಕೈಗೆಟಕುವಂತೆ ಇರಬೇಕು ಎಂಬುದು ನಾಗರಾಜ್ ಅವರ ಆಶಯ. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯಿಂದ ಅವರು ಕಾರ್ಯನಿರ್ವಹಿದ್ದಾರೆ. : , ,